Karnataka floods: After heavy rains and floods in Kodagu districts, people are facing heavy loss of their crops, property. <br /> <br />ಮಡಿಕೇರಿಯಲ್ಲಿ ಈ ಬಾರಿ ಸುರಿದಿದ್ದು ಅಂತಿಂಥ ಮಳೆಯಲ್ಲ ಅದು ಕುಂಭದ್ರೋಣ ಮಳೆ ಎಂಬುದನ್ನು ಇದುವರೆಗೆ ಸುರಿದ ಅದರ ಪ್ರಮಾಣದಿಂದಲೇ ಸುಲಭವಾಗಿ ಹೇಳಿ ಬಿಡಬಹುದು. ಜಿಲ್ಲೆಯ ಮೂರು ತಾಲೂಕುಗಳಿಗೆ ಹೋಲಿಸಿದರೆ ಮಡಿಕೇರಿಯಲ್ಲಿಯೇ ಅತಿಹೆಚ್ಚು ಮಳೆ ಸುರಿದಿದ್ದು, ಅದರ ಪರಿಣಾಮವೇ ಇವತ್ತು ಆಗ ಬಾರದ ಅನಾಹುತವಾಗಿದೆ. ತಿಂಗಳು ಪೂರ್ತಿ ಸುರಿಯುವ ಮಳೆ ಒಂದೇ ದಿನದಲ್ಲಿ ಸುರಿದರೆ ಅದನ್ನು ತಡೆದುಕೊಳ್ಳುವುದು ಅಷ್ಟು ಸುಲಭವಲ್ಲ. ಜತೆಗೆ ಅದರ ಪರಿಣಾಮವೂ ಭಯಂಕರವಾಗಿರುತ್ತದೆ.
